Friday 3 February 2017

ನೀ ಕಡಲಾದರೆ

ನೀ ಕಡಲಾದರೆ
ನಾನಾಗಬೇಕು ಮೀನು
ನಿನ್ನಾಳದಲ್ಲಿ ಹುದುಗಿರುವ
ಮುತ್ತನ್ನೆಲ್ಲ ನನ್ನದಾಗಿಸಲು
ನೀ ಆಕಾಶವಾದರೆ
ನಾನಾಗಬೇಕು ಭೂಮಿ
ನಿನ್ನಲ್ಲಿರುವ ಚಂದ್ರ ನಕ್ಷತ್ರಗಳ
ಬೆಳಕನ್ನೆಲ್ಲ ನನ್ನದಾಗಿಸಲು
ನೀ ಮಾತಾದರೆ
ನಾನಾಗಬೇಕು ಮೌನಿ
ನೀನಾಡದೇ ಉಳಿಸಿದ
ಮಾತುಗಳನ್ನೆಲ್ಲ ನನ್ನದಾಗಿಸಲು..
- ಉಷಾ ಬೆಕ್ಮನೆ

1 comment:

  1. ತುಂಬಾ ಚಂದ ಹುಡುಗಿ ನಿನ್ನ ಆಸೆ...

    ReplyDelete