ಪ್ರೀತಿ
ಮೊಗ್ಗಾಗಿಯೇ ಉಳಿದಿರುವ ಪ್ರೀತಿಇನ್ನೂ ಅರಳಬೇಕಿದೆ
ಮುಸ್ಸಂಜೆಯಲಿ ನೇಸರ ಇಳೆಗೆ ಅಪ್ಪಿದಾಗ
ಭಾವಗೀತೆಯೊಂದು ಮೋಡಿ
ರಾಗವಾಗಿ ಹರಿಯಬೇಕಿದೆ
ಸಾಗರದ ಅಂಚಲ್ಲಿ ನಿನ್ನ ಹೆಸರಿನೊಂದಿಗೆ
ನನ್ನ ಹೆಸರನು ಸೇರಿಸಿ ಬರೆಯಬೇಕಿದೆ
ಮನದಲಿ ಪ್ರೀತಿಯ ಖಾತೆಯೊಂದನು
ಜಂಟಿಯಾಗಿ ತೆರೆಯಲು ಬೆಟ್ಟದಷ್ಟು
ಪ್ರೀತಿ ಹೊತ್ತು ನೀ ಬರಬೇಕಿದೆ
ನನ್ನ ಮೌನದ ಹಿಂದಿರುವ ಪದಗಳನು ಹೆಕ್ಕಿ
ನನ್ನೆದೆಯಲಿ ನೀನು
ಕವಿತೆಯೊಂದನು ಬರೆಯಬೇಕಿದೆ....
ಪ್ರಶ್ನೆ
ಮನದ ಮೂಲೆಯಲಿ ನನ್ನದೇಕಲರವ ಇದ್ದರೇನು ಸಾವಿರ
ನೀ ಬೊಗಸೆ ತುಂಬಿ ಕೊಟ್ಟ
ನೋವು ಮರೆಮಾಚುವುದೇ ಅಂತರ
ಅರ್ಥವಾಗದ ಪ್ರಶ್ನೆಯಾಗಿ ನೀನೇ ನನ್ನ ಕಾಡುತಿರುವಾಗ
ನಿನ್ನೀ ಪ್ರಶ್ನೆಗೆ ಹೇಗೆ ಕೊಡಲಿ ನಾ ಉತ್ತರ ????
No comments:
Post a Comment